Posts

Showing posts from December, 2024

ಕೊರಗಜ್ಜನ ಕಾಲಜ್ಞಾನ ವಚನ

Image
ಕಲ್ಲಕೋಟೆಯ ದುರ್ಗಿ ನೂರ್ಬಂಟರಾಳುವ ತೆರದಿ,  ಜಗವ ತಲ್ಲಣಿಸಿ ಆಳುವಳು ಜನ ಹೌದೌದೆನಲು ಸುವ್ವಿ. ದೇಶ ವಿದೇಶದ ಜನರ ಹಿಡಿತಂದು ರಾಶಿಯ ಮಾಡಿ ಕಲ್ಯಾಣ ರಾಜ್ಯವ ಕಟ್ಯಾಳು ಸುವ್ವಿ. ವೀರ ಸಂಗನ ಬಸವ ನಾಮವ ನಾಡಹಂದರಕ್ಕೆ ಹಬ್ಬಸ್ಯಾಳು ಸುವ್ವಿ - ಕೊರಗಜ್ಜನ ಕಾಲಜ್ಞಾನ .

ಮರಳು ಶಂಕರ ದೇವರ ವಚನಗಳು

Image
  ಮರಳು ಶಂಕರ ದೇವರ ವಚನ. ಲಿಂಗದೇವನ ಧರಿಸಿ ಲಿಂಗವಂತ ಲಿಂಗಭಕ್ತ ಲಿಂಗಾಚಾರಿಯೆನಿಸಿಕೊಂಡ ಬಳಿಕ. ಲಿಂಗದ ನಚ್ಚು,ಲಿಂಗದ ಮಚ್ಚು, ಲಿಂಗವೇ ಪ್ರಾಣವಾಗಿರಬೇಕಲ್ಲದೆ ಮತ್ತೆ ತಪ್ಪಿ ನಡೆದು, ತಪ್ಪಿ ನುಡಿದು, ಪರಧನ ಪರ ಸ್ತ್ರೀಯರ ಸಂಗವ ಮಾಡಿ,ದುರ್ಗುಣ ದುರಾಚಾರದಲ್ಲಿ ನಡೆದು,ಮತ್ತೆ ತಾವು ಲಿಂಗವಂತರೆನಿಸಿಕೊಂಬ ಪರಿಯ ನೋಡಾ,  ಇದು ಲಿಂಗದ ನಡೆಯಲ್ಲ. ಲಿಂಗದ ನುಡಿಯಲ್ಲ.ಇದನ್ನು ನಮ್ಮ ಶರಣರು ಮೆಚ್ಚರು.ಲಿಂಗವಂತನ ಪರಿ ಬೇರೆ ಕಾಣಿರೆ. ಲಿಂಗಕ್ಕೆ ಲಿಂಗವೇ ಪ್ರಾಣವಾಗಿರಲು ಬಲ್ಲ ಲಿಂಗಕ್ಕೆ ಲಿಂಗವೇ ಭೋಗವಾಗಿರಲು ಬಲ್ಲ.  ಲಿಂಗಕ್ಕೆ ಲಿಂಗವೇ ಭೋಗವಾಗಿರಲು ಬಲ್ಲ.ಲಿಂಗಕ್ಕೆ ಲಿಂಗವೆ ಸಂಗವಾಗಿರಲು ಬಲ್ಲ. ಇಂತಪ್ಪ ಲಿಂಗವಂತನ ಸದಾಚಾರಿಯೆಂಬೆನು. ಇಂತಪ್ಪ ಲಿಂಗವಂತನ ಸರ್ವಾಂಗಲಿಂಗಿಯೆಂಬೆನು.ಇಂತಪ್ಪ ಲಿಂಗವಂತನ ಸರ್ವಕರಣ ನಿರ್ಮುಕ್ತ ಸರ್ವನಿರ್ವಾಣಿ ಕಾಯನೆಂಬೆನು. ಇಂತಪ್ಪ ಮಹಾಮಹಿಮನ ನಿಲುವು ಎಲೆಗಳೆದ ವೃಕ್ಷದಂತೆ, ಉಲುಹಡಗಿಪ್ಪ ಶರಣನ ಪರಿಯ ನೀವೇ ಬಲ್ಲಿರಲ್ಲದೆ, ಮತ್ತೆ ಉಳಿದಾದ ಅಜ್ಞಾನಿ ಸಂದೇಹ ಮಾನವರೆತ್ತ ಬಲ್ಲರಯ್ಯ,  ಶುದ್ಧ ಸಿದ್ಧ ಪ್ರಸಿದ್ಧ ಪ್ರಸನ್ನ ಪ್ರಭುವೇ ಶಾಂತ ಚೆನ್ನಮಲ್ಲಿಕಾರ್ಜುನ ದೇವಯ್ಯ ನಿಮ್ಮ ಲಿಂಗಾವಧಾನಿಯ ಪರಿಯ ನೀವೇ ಬಲ್ಲಿರಲ್ಲದೆ ನಾನೆತ್ತ ಬಲ್ಲೆನಯ್ಯಾ. ನಿಮ್ಮ ಧರ್ಮ ನಿಮ್ಮ ಧರ್ಮ ನಿಮ್ಮ ಧರ್ಮ - ಬಸವ ಯುಗದ ವಚನ ಮಹಾಸಂಪುಟ ವಚನದ ಸಂಖ್ಯ 1112.